ಬಜಾರ್ ತಾಯಿ-ಮಗನ ಬಾಂಧವ್ಯ
Posted date: 06 Thu, Aug 2015 – 10:24:33 AM

ಸುನಿ ಸಿನಿಮಾಸ್ ಲಾಂಛನದಲ್ಲಿ ದರ್ಶನ್‌ಕನಕ ನಿರ್ಮಾಣದ ಬಜಾರ್ ಚಿತ್ರಕ್ಕೆ ಮಹಾಲಕ್ಷ್ಮೀಪುರದ  ಖಾಸಗಿ ಮನೆಯೊಂದರಲ್ಲಿ  ಬಹಳ ದಿನಗಳ ಕಾಲ ಮಗ ಮನೆಗೆ ಬಂದಾಗ ತಾಯಿಗೆ ಎಲ್ಲಿಲ್ಲದ ಆನಂದ.  ಮಗನನ್ನು ಕಂಡು ಕಣ್ಣೀರಿಡುತ್ತಾ ಇಷ್ಟು ದಿನಗಳ ಕಾಲ ಎಲ್ಲಿ ಹೋಗಿದ್ದ, ಹೆತ್ತ ತಾಯಿ  ಜ್ಞಾಪಕ ಬರಲಿಲ್ಲವಾ ನಿನಗೆ  ಇಲ್ಲಿ ನಾನು ಎಷ್ಟು ಕಷ್ಟಪಡ್ತಾ ಇದ್ದೀನಿ, ಒಂದ್ಸಲಾನಾದ್ರು ನೋಡ್ಬೇಕು ಅಂತ ಅನ್ನಿಸ್ಲಿಲ್ವಾ ನಿನಗೆ ಎಂದಾಗ ಮಗ ತಾಯಿಯನ್ನು ಅಮ್ಮಾ ಹ್ಯಾಗಿದ್ದೀಯಾ ಅಂತ ಕೇಳುತ್ತಾನೆ ಅದಕ್ಕೆ ತಾಯಿ ಏನೋ ನೆಂಟ್ರು ಬಂದು ವಿಚಾರ‍್ಸೋ ತರ ವಿಚಾರಿಸ್ತಾ ಇದೀಯ ಎಂದು ಹೇಳುವ ತಾಯಿ-ಮಗನ ಬಾಂಧವ್ಯದ ದೃಶ್ಯ ಚಿತ್ರೀಕರಣವಾಯಿತು. ನಿಜ ಜೀವನದಲ್ಲಿ ತಾಯಿ-ಮಗನಾಗಿರುವ ಯೋಗಿ-ಅಂಬುಜಮ್ಮ ಪಾಲ್ಗೊಂಡಿದ್ದರು.  ಹರಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಛಾಯಾಗ್ರಾಹಕ-ದರ್ಶನ್‌ಕನಕ, ಸಂಗೀತ-ಬಿ.ಜೆ.ಭರತ್, ಸಂಕಲನ-ಮಾರಿಶ್, ಕಲೆ- ಪ್ರಭು-ರಘು, ಸಾಹಸ -ಮಾಸ್ ಮಾದ, ನೃತ್ಯ-ಹೈಟ್ ಮಂಜು, ಸಹ ನಿರ್ದೇಶನ - ಅಭಯ್, ಸುನಿಲ್ ಪಾಳ್ಯ, ನಿರ್ವಹಣೆ-ಅನಿಲ್, ತಾರಾಗಣದಲ್ಲಿ - ಯೋಗಿ, ನವೀನ್ ಕೃಷ್ಣ, ಅಂಬುಜಮ್ಮ, ಶಿವಮಂಜು, ಸೂರ‍್ಯ ನೀನಾಸಂ, ಮಂಜು ಪ್ರಭಾಸ್, ದೀಕ್ಷಿತ್, ಸಂದೀಶ್, ಕಂಠಿ, ಮದನ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed